Tuesday, 29 October 2019

ಬಾರೇ ವೆಂಕಟರಮಣಿ

ಬಾರೇ  ವೆಂಕಟರಮಣಿ । ಶ್ರೀ ಶ್ರೀದೇವಿ ।। ಪ ।।
ಬಾರೇ ವೆಂಕಟರಮಣಿ ಪಾರಾಯಣ ಕೇಳೆ
ಚಾರುವದನೆ ಉಪಹಾರ ಕಾಲಕೆ ನಿತ್ಯ ।। ಪ ।।

ಏನು ಪುಣ್ಯವೆ ನಂದು ಪಾರಾಯಣಿ । ನೀನೆೇ ಕೇಳುತಬಂದು ।
ಹೀನ ಮಾನವನಿಗೆ ನೀನು ಬರುವಿಯಂದು ಜ್ಞಾನವಿಲ್ಲದೆ
ಉಚ್ಛಸ್ಥಾನದೊಳಗೆ ಕೂಡೆ ।। ಪ ।।

ಸ್ವಪ್ನದೊಳಗೆ ಬರುವಿ ಶ್ರೀ ಶ್ರೀದೇವಿ । ಕ್ಷಿಪ್ರತನದಿ ಪೋಗುವಿ ।
ಸರ್ಪಶಯನ ನಮ್ಮಪ್ಪ ಗೋಕುಲ ಬಾಲ । ನಪ್ಪಿ ಕೊಂಬುವ
ಸುಖ ಒಪ್ಪಿಸು ಬೇಗನೆ ।। ಪ ।।

ಮಂಗಳಾಂಗಿಯೆ ನಿನ್ನ ಕಾಣದೆ ಬಲು । ಭಂಗಪಡುವೆನಮ್ಮ ।
ಗಂಗ ಜನಕ ಸಿರಿ ರಂಗನಂಕದಿ ಕೂತು ।
ಬೃಂಗ ಕುಂತಳೆ ಹೃದಯಾಂಗದೊಳಗಾಡೆ ।। ಪ ।।

ಎಲ್ಲ ದೇವತಗಳನು ನೀ ತಡೆದಿಹ । ಪುಲ್ಲ ವಾರಿಜನಯನೆ ।
ಗೊಲ್ಲ ಬಾಲನ ಪದ ಪಲ್ಲವ ನೋಡದೆ ನಿಲ್ಲವಲ್ಲರು
ಮನ ಸೊಲ್ಲು ಲಾಲಿಸು ಬೇಗ ।। ಪ ।।

ಇಂದಿರೇಶನ ರಾಣಿ ಎನ್ನಯಮನ ಮಂದಿರದೊಳು ಬಾ ನೀ ।
ನಂದಗೋಕುಲ ಬಾಲ ಕಂದಾರನೆತ್ತಿಕರ ತಂದು ತೋರಿಸೆ
ಅರವಿಂದ ನಯನೆ ಲಕ್ಷ್ಮಿ ।।
  

No comments:

Post a Comment