Tuesday, 29 October 2019

ಇಂದು ನಿನ್ನ ಮೊರೆಯ ಹೊಕ್ಕೆನು

ಇಂದು ನಿನ್ನ ಮೊರೆಯ ಹೊಕ್ಕೆನು ವೆಂಕಟೇಶನೇ ।
ಎಂದಿಗಾದರೆನ್ನ ಕಾಯೋ ಶ್ರೀನಿವಾಸನೇ ।।

ಶೇಷಗಿರಿಯ ವಾಸ ಶ್ರೀಶ ದೋಷರಹಿತನೇ
ಏಸು ದಿನಕು ನಿನ್ನ ಪಾದ ದಾಸನು ನಾನೇ
ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೇ  ।।

ಕಮಲನಯನ ಕಾಮ ಜನಕ ಕರುಣವಾರಿದೇ
ರಮೆಯ ನಾಲ್ವ ಕಮಲನಾಭ ಹೇ ದಯಾನಿಧೇ
ಯಮನ ಪುರದಿ ಶಿಕ್ಷಿಸದಿರು ಪಾರ್ಥಸಾರಥೀ ।।

ಉರಗ ಶಯನ ಸುರರಿಗೊಡೆಯ ಸಿರಿಯ ರಮಣನೇ
ಶರಣ ಪಾಲ ಬಿರುದು ತೋರಿ ಪೊರೆವ ದೇವನೆ
ಕರುಣಿಸೆನಗೆ ಮುಕುತಿಯ ಪುರಂದರ ವಿಠ್ಠಲ ।।




No comments:

Post a Comment