Tuesday, 29 October 2019

ಪೂಜಿಪೆನೆ ನಿನ್ನಾ

ಪೂಜಿಪೆನೆ ನಿನ್ನಾ । ಪೂಜಿಪೆ ನಾ ನಿನ್ನ
ಜಾಜಿ ಪುಷ್ಪಗಳಿಂದ ಮೂರ್ಜಗನ್ಮಾತೆಯೇ
ಅಮರಾದಿ ಸುರರಿಂದ ಅಭಿವಂದಿತಳೆ ನಿನ್ನ
ಪಾದಾಂಬುಜವ ತೋರಿ ಪಾವನ ಮಾಡೆನ್ನ ।। ಪ ।।

ಅಂಬುಜಾಕ್ಷಿಯೆ ನಿನಗೆ ಚಿನ್ನದ ಕುಂಬದಿ
ಅಭಿಷೇಕ ಮಾಡುವೆನೆ । ಪೀತಾಂಬರವನುಟ್ಟು
ಸರ್ವಾಭರಣ ತೊಟ್ಟು ಅರಮನೆ ಮಂಟಪಕೆ
ಬಾರೆ ನಾರಾಯಣಿ ।। ಪೂಜಿಪೆನೆ ನಿನ್ನಾ ।।

ಅರಿಶಿಣ ಕುಂಕುಮ ಕರದಲ್ಲಿ ಹಿಡಕೊಂಡು
ಹರುಷದಿಂದೇರಿಸುವೆ ಬಿಡಿಮಲ್ಲಿಗೆಯ ತಂದು
ನಡೆಮುಡಿಗ್ಹಾಸುವೆ ಕಡಲಶಯನರಾಣಿ
ನಡೆದು ಬಾರಮ್ಮ ತಾಯೇ ।। ಪೂಜಿಪೆನೆ ನಿನ್ನಾ ।।

ಕಲ್ಹಾರದಿ ಪುಷ್ಪ ಮಲ್ಲಿಗೆ ಜಾಜಿಗೆ ಎಲ್ಲ ಸಮರ್ಪಿಸುವೆ
ಬಲ್ಲಿದ ಭಕ್ತರ ಬಿಷ್ಠೆಯ ಸಲ್ಲಿಸೆಂದು ಒಲ್ಲೆಂದು
ವೈಕುಂಠ ಕೊಲ್ಹಾಪುರಕ್ಕೆ ನಡೆ ।। ಪೂಜಿಪೆನೆ ನಿನ್ನಾ ।।

ಮಡದಿಯರೆಲ್ಲರು ಸಡಗರದಿಂದಲಿ
ಉಡಿಯತುಂಬುವರಮ್ಮಾ ಪಾಯಸ ಮೃಷ್ಟಾನ್ನ
ತೃಪ್ತಳಾಗಿ ಉಂಡು ಅಷ್ಟಐಶ್ವರ್ಯವ
ನೀಡೆ ಲಕ್ಷುಮಿ ದೇವಿಯೆ  ।। ಪೂಜಿಪೆನೆ ನಿನ್ನಾ ।।

ನಿತ್ಯ ತೃಪ್ತಳೆ ನಿನಗೆ ಮುತ್ತಿನಾರುತಿಯನ್ನು
ಅರ್ತಿಯಿಂದ ಬೆಳಗುವೆನೆ । ದಂಪತ್ತು ಸಂಪತ್ತು
ಹೆತ್ತ ಮಕ್ಕಳನಿತ್ತು ಆಪತ್ತು ಬಿಡಿಸಮ್ಮಾ
ಅನಂತ ಶಯನರಾಣಿ ।। ಪೂಜಿಪೆನೆ ನಿನ್ನಾ ।।


No comments:

Post a Comment