ಎಷ್ಟು ಹೇಳಲಿ ವೆಂಕಟಗಿರಿಯ ।
ದ್ರಿಷ್ಟಿಗೆ ಬಹು ಸಿರಿಯಾ ।
ಬೆಟ್ಟವನೆ ಮನಸಿಟ್ಟೇರಲು ಬೇಡಿದ ।
ಇಷ್ಟಾರ್ಥಗಳ ಈಡಾಡುವ ದೊರೆಯ ।।
ಚಿತ್ರವಿಚಿತ್ರದ ಮಹಾದ್ವಾರವು ಚಿನ್ನದ ಗೋಪುರವು ।
ಸ್ವಚ್ಛವಾದ ಸ್ವಾಮಿ ಪುಷ್ಕರಿಣಿ ತೀರ ಸುತ್ತಲು ಪ್ರಾಕಾರ ।।
ಹೆಚ್ಚಿನ ತೀವ್ರತೆ ಮನೋಹರ ಮಾಡುವ ವಿಸ್ತಾರ ।
ಚಿತ್ತಜನಯ್ಯನ ಶೈಲ ದೂರದೆಂದೆತ್ತಿ ಬರುವುದು ಈತನ ಪರಿವಾರ ।। ಪ ।।
ರತ್ನ ಮಾಣಿಕ್ಯದ ಕೇಯೂರ ಕಟ್ಟಿದ ಉಡಿದಾರ ।
ಉಟ್ಟಿದ ನೀರಜ ಪೀತಾಂಬರ ಕೌಸ್ತುಭ ಮಣಿಹಾರ ।।
ಗಟ್ಟಿ ಕಂಕಣ ಕುಂಡಲಧರ ಚತುರ್ಭುಜದಲಂಕಾರ ।
ವಕ್ಷಸ್ಥಳದಲಿ ಹೊಂದಿದ ಶ್ರೀ ಮಹಾಲಕ್ಷ್ಮಿಗೊಲಿದ ಶೃಂಗಾರ ।। ಪ ।।
ಆಕಾಶರಾಜನ ಕಿರೀಟವು ಚಿತ್ರವು ಬಹು ಮಾಟ ।
ಹಾಕಿದ್ದ ಹರಿ ಕಡೆಗಣ್ಣಿನ ನೋಟ ಭಕ್ತರ ಕುಣಿದಾಟ ।।
ಬೇಕಾದ ಭಕುತರ ಭವಪಡಿಕಾಟ ಬಿಡಿಸುವ ಯಮಕಾಟ ।
ಕೋಟಿಜನರ ಓಡಾಟವೆ ನಮ್ಮ ಕಿರೀಟವು ಸುಖ ಮಂದಿರದೊಳಗೆ ।। ಪ ।।
ಕಪ್ಪುಕಾಣಿಕೆಯ ಬೇಡುವ ಸರ್ಪ ಶೈಲದ ತಿಮ್ಮಪ್ಪ ।
ಕಪ್ಪುವ ಕಾಸು ಕವಡೆ ಮುಡುಪು ಹಾಕಿದತಾನೊಪ್ಪ ।।
ಜಪ್ಪಿಸಿ ನೋಡುವ ಜನರ ತಪ್ಪು ಹುಡುಕ್ಯಾಡುತಲಿಪ್ಪ ।
ಅಪ್ರಮೇಯಮಾನಂತ ಮೂರುತಿ ತಾ ಕೊಡುವ ಸಾರೂಪ್ಯ ।। ಪ ।।
ದೇಶದೇಶದೊಳು ಈತನ ವಾರುತೆ ತುಂಬಿದ ಕೀರುತಿಯು ।
ಆಸೆಯ ದೈವ ಈ ಮೂರುತಿಯು ಫಲ್ಗುಣ ಸಾರಥಿಯು ।।
ಲೇಸಾಗಿ ಜನರ ನೋಡುವ ರತಿಯು ಕರ್ಪೂರದಾರತಿಯು
ವಾಸವಾಗಿರುವ ಶೇಷಾದ್ರಿಯಲಿ ಭೀಮೇಷ ಕೃಷ್ಣ ಶ್ರೀನಿವಾಸ ಕೃಪಾಳು ।।

No comments:
Post a Comment