Tuesday, 29 October 2019

ಬಾರೋ ವೆಂಕಟೇಶ

ಬಾರೋ ವೆಂಕಟೇಶ ಮನೆಗೆ ಬಾರೋ ಶ್ರೀನಿವಾಸ
ತೊಡೆಯಲಿಟ್ಟು ಮುದ್ದು ಕೊಟ್ಟು ಹಾಲು ಸಕ್ಕರೆ
ಸಹಿತವಾಗಿ ಪುಟ್ಟ ಬಟ್ಟಲೊಳಗೆ ನಿನಗೆ
ಹೊಟ್ಟೆ ತುಂಬಾ ಹಾಲು ಕೊಡುವೆ ।।

ಸಣ್ಣನಾಮ ಹಣೆಯಲ್ಲಿ ಹೊಳೆಯುತಾ
ಶಂಖಚಕ್ರ ಪದ್ಮ ಕಿರೀಟವ ತೋರುತ ।
ವಾಮಭಾಗದಲ್ಲಿ ಲಕ್ಷ್ಮಿ ದೇವಿಯೊಡನೆ
ಸರಸವಾಡುತ ಅಮ್ಮ ಬಹಳ ಹಸಿವೆಯೆಂದರೆ
ಕೈಯ ತುಂಬಾ ಬೆಣ್ಣೆ ಕೊಡುವೆ  ।। ಪ ।।

ಚಿನ್ನಿ ಕೋಲು ಚೆಂಡನಾಡುತ ಗೆಳೆಯರೊಡನೆ ಗೊಲ್ಲನಾಗಿ
ಗೋವು ಕಾಯುತ ।
ಕಾಲು ಪಟ್ಟೆಕಾಲಲುಟ್ಟು ತುಳಸಿ ಮಾಲೆ ಕೊರಳ
ಧರಿಸಿ ನಿಮ್ಮ ಪಾದ ಮಂದಕಿಟ್ಟು
ಎನ್ನ ಮೇಲೆ ಚಿತ್ತವಿಟ್ಟು ।। ಪ ।।

ಬಾಲರಿಲ್ಲದ ಬಂಜೆ ಎನುವರೋ ಎನ್ನ ಜನ ಬಾಲರನ್ನು
ಪಡೆದ ಜಾಣರು । ಹಸುಳೆ ಇಲ್ಲದೆ ಬಹಳವಾಗಿ
ವ್ಯಸನದಿಂದ ಕಾಲ ಕಳೆದೆ ಶಿಶುವಾಗಿ ತೋರಿ
ಬಂದ ಶೇಷಗಿರಿಯ ಶ್ರೀನಿವಾಸ ।। ಪ ।।  

ಓಡಿ ಬಾರಯ್ಯ ವೈಕುಂಠಪತಿ

ಓಡಿ ಬಾರಯ್ಯ ವೈಕುಂಠಪತಿ 
ನಿನ್ನ ನೋಡುವೆ ಮನದಣಿಯಾ 

ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ 
ಪಾಡಿ ಪೊಗಳುವೆನು ಪರಮಪುರುಷ ಹರಿ ।।

ಕೆಂದಾವರೆ ಪೋಲ್ವ ಪಾದಗಳಿಂದ ರಂಗ 
ಧಿಮಿಧಿಮಿಧಿಮಿಕೆಂದು ಕುಣಿಯುತಲಿ ।
ಅಂದುಗೆ ಕಿರುಗೆಜ್ಜೆ ಘಲಿ ಘಲಿ ಎನ್ನುತಿದೆ 
ಅರವಿಂದ ನಯನನೆ ಗೋವಿಂದ ಬಾರೋ ।।

ಕೋಟಿ ಸೂರ್ಯ ಪ್ರಕಾಶದಂತೆ 
ಕಿರೀಟ ಕುಂಡಲಿ ಬಾವುಲಿ ಹೊಳೆಯೆ ।
ಲಲಾಟ ಕಸ್ತೂರಿ ತಿಲಕವನಿಡುವೆ 
ಗೋಪಾಲರ ಆಟ ಸಾಕೋ ಈಗ ।।

ಮಂಗಳಾತ್ಮಜ ಮೋಹನ ಕಾಯೋ ರಂಗ 
ಸಂಗೀತ ಪ್ರೀಯ ಸದ್ಗುಣಶೀಲ ।
ಅಂಗನೆಯರಿಗೆಲ್ಲ ಅತಿ ಪ್ರಿಯನಾದ ಮಂಗಳ 
ಮೂರುತಿ ಪುರಂದರ ವಿಠ್ಠಲ ।।


ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ

ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ
ಭಯವು ಇನ್ಯಾತಾಕಯ್ಯಾ ।।

ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ ।

ಕನಸಿಲಿ ಮನಸಿಲಿ ಕಳವಳವಾದರೆ
ಹನುಮನ ನೆನೆದರೆ ಹಾರಿಹೋಗದೆ ಪಾಪ ।।

ರೋಮ ರೋಮಕೆ ಕೋಟಿ ಲಿಂಗವುದುರಿಸಿದ
ಭೀಮನ ನೆನೆದರೆ ಬಿಟ್ಟು ಹೋಗದೆ ಭೀತಿ ।।

ಪುರಂದರವಿಠಲ್ಲನ್ನ ಪೂಜೆಯ ಮಾಡುವ
ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ ।।

ಬೊಮ್ಮಘಟ್ಟರಾಯ ಪಾಲಿಸೋ

ಬೊಮ್ಮಘಟ್ಟರಾಯ ಪಾಲಿಸೋ ನಮ್ಮ ನೀ ಮಹರಾಯ
ಧರ್ಮಾಧ್ಯ ಕಾಮಾರ್ಥ ಕೊಡುವೋ ಕರುಣಾ೦ಬುದಿ ।

ಸುಗ್ರೀವಗೆ ನೀ ವಲಿದ್ವಾಲಿಯನು
ನಿಗ್ರಹ ಮಾಡುತ ಪರಮಾಗ್ರಹದಲಿ ।
ಶೀಘ್ರದಿಂದಲಿ ದಶಗ್ರೀವನ ಲಂಕೆ
ದುರ್ಗದಲ್ಯಾಡಿ ಧಗ್ನಿಯ ಒಡಗೂಡಿ ।। ಪ ।।

ರಾಮಪದಾಂಬುಜ ಸೇವಕ ಸೇತುವೆ
ಪ್ರೇಮದಿ ಕಟ್ಟಿ ನಿಂತನು ರಣದಿ ।
ನೇಮದಿಂದಲಿ ಸಂಜೀವನ ತಂದಾತ
ವಾಹನನಾದ ತ್ರಿಧಾಮದೊಡೆಯಗೆ ।। ಪ ।।

ವಾತಾತ್ಮಜ ರಘುನಾಥಗೆ ನೀನಿಜ
ಧೂತ ನೆನೆಸಿ ಬಹು ಪ್ರೀತಿಯಿಂದಲಿ ।
ಭೂತಳದೊಳು ಪ್ರಖ್ಯಾತಿಯ ಪಡೆದ
ನಿರ್ಭೀತನಾದ ಭೀಮೇಶ ಕೃಷ್ಣನ ।। (ಪ್ರೀಯ)

ಪಾಲಿಸೆ ಎನ್ನ ಶ್ರೀ ಮಹಾಲಕ್ಷ್ಮಿ

ಪಾಲಿಸೆ ಎನ್ನ ಶ್ರೀ ಮಹಾಲಕ್ಷ್ಮಿ 
ಪಾಲಿಸೆ ಎನ್ನನು ।।

ವೇದಾಭಿಮಾನಿಯೇ ಸಾರಸಾಕ್ಷಿ 
ಶ್ರೀಧರರಮಣಿ । ಕಾದುಕೋ ನಿನ್ನಯ 
ಪಾದಸೇವಕರನ್ನು ಆದಿ ಶಕ್ತಿ ಸರ್ವ 
ಧಾರೆ ಗುಣಾಪೂರ್ಣೇ ।। ಪ  ।।

ದಯದಿಂದ ನೋಡೆ ಭಜಿಪ ಭಕ್ತರು ಭಯದೂರಮಾಡೇ
ದಯಪಾಲಿಸೆ ಮಾತೆ ತ್ರೈಲೋಕ್ಯವಿಖ್ಯಾತೆ ಜಯದೇವಿ 
ಸುವ್ರತೆ ಹಯವದನನ ಪ್ರೀತೆ ।। ಪ ।।

ನೀನಲ್ಲಾ ದನ್ಯ ರಕ್ಷಿಪರನ್ನು ಕಾಣೀ ನಾ ಮುನ್ನಾ 
ದಾನವಾಂತಕ ಸಿರಿ ಪುರಂದರ ವಿಠ್ಠಲನ 
ಧ್ಯಾನಿಪ ಭಕುತರ ಮಾನ ನಿನ್ನದು ತಾಯೇ ।। ಪ ।।  

ಎಷ್ಟು ಹೇಳಲಿ ವೆಂಕಟಗಿರಿಯ

ಎಷ್ಟು ಹೇಳಲಿ ವೆಂಕಟಗಿರಿಯ ।
ದ್ರಿಷ್ಟಿಗೆ ಬಹು ಸಿರಿಯಾ ।
ಬೆಟ್ಟವನೆ ಮನಸಿಟ್ಟೇರಲು ಬೇಡಿದ ।
ಇಷ್ಟಾರ್ಥಗಳ ಈಡಾಡುವ ದೊರೆಯ ।।

ಚಿತ್ರವಿಚಿತ್ರದ ಮಹಾದ್ವಾರವು ಚಿನ್ನದ ಗೋಪುರವು ।
ಸ್ವಚ್ಛವಾದ ಸ್ವಾಮಿ ಪುಷ್ಕರಿಣಿ ತೀರ ಸುತ್ತಲು  ಪ್ರಾಕಾರ ।।
ಹೆಚ್ಚಿನ ತೀವ್ರತೆ ಮನೋಹರ ಮಾಡುವ ವಿಸ್ತಾರ ।
ಚಿತ್ತಜನಯ್ಯನ ಶೈಲ ದೂರದೆಂದೆತ್ತಿ ಬರುವುದು ಈತನ ಪರಿವಾರ ।। ಪ ।।

ರತ್ನ ಮಾಣಿಕ್ಯದ ಕೇಯೂರ ಕಟ್ಟಿದ ಉಡಿದಾರ ।
ಉಟ್ಟಿದ ನೀರಜ ಪೀತಾಂಬರ ಕೌಸ್ತುಭ ಮಣಿಹಾರ ।।
ಗಟ್ಟಿ ಕಂಕಣ ಕುಂಡಲಧರ ಚತುರ್ಭುಜದಲಂಕಾರ ।
ವಕ್ಷಸ್ಥಳದಲಿ ಹೊಂದಿದ ಶ್ರೀ ಮಹಾಲಕ್ಷ್ಮಿಗೊಲಿದ ಶೃಂಗಾರ ।। ಪ ।।

ಆಕಾಶರಾಜನ ಕಿರೀಟವು ಚಿತ್ರವು ಬಹು ಮಾಟ ।
ಹಾಕಿದ್ದ ಹರಿ ಕಡೆಗಣ್ಣಿನ ನೋಟ ಭಕ್ತರ ಕುಣಿದಾಟ ।।
ಬೇಕಾದ ಭಕುತರ ಭವಪಡಿಕಾಟ ಬಿಡಿಸುವ ಯಮಕಾಟ ।
ಕೋಟಿಜನರ ಓಡಾಟವೆ ನಮ್ಮ ಕಿರೀಟವು ಸುಖ ಮಂದಿರದೊಳಗೆ  ।। ಪ ।।

ಕಪ್ಪುಕಾಣಿಕೆಯ ಬೇಡುವ ಸರ್ಪ ಶೈಲದ ತಿಮ್ಮಪ್ಪ ।
ಕಪ್ಪುವ ಕಾಸು ಕವಡೆ ಮುಡುಪು ಹಾಕಿದತಾನೊಪ್ಪ ।।
ಜಪ್ಪಿಸಿ ನೋಡುವ ಜನರ ತಪ್ಪು ಹುಡುಕ್ಯಾಡುತಲಿಪ್ಪ ।
ಅಪ್ರಮೇಯಮಾನಂತ ಮೂರುತಿ ತಾ ಕೊಡುವ ಸಾರೂಪ್ಯ ।। ಪ ।।

ದೇಶದೇಶದೊಳು ಈತನ ವಾರುತೆ ತುಂಬಿದ ಕೀರುತಿಯು ।
ಆಸೆಯ ದೈವ ಈ ಮೂರುತಿಯು ಫಲ್ಗುಣ ಸಾರಥಿಯು ।।
ಲೇಸಾಗಿ ಜನರ ನೋಡುವ ರತಿಯು ಕರ್ಪೂರದಾರತಿಯು
ವಾಸವಾಗಿರುವ ಶೇಷಾದ್ರಿಯಲಿ ಭೀಮೇಷ ಕೃಷ್ಣ ಶ್ರೀನಿವಾಸ ಕೃಪಾಳು ।।



ಏನಾ ಹೇಳಲೆ ತಂಗಿ

ಏನಾ ಹೇಳಲೆ ತಂಗಿ ತಿಮ್ಮಯ್ಯನ ಪಾದವನು ಕಂಡೇ ।
ಕನಸ ಕಂಡೇನೆ ಮನದಲಿ ಕಳವಳಗೊಂಡೇನೆ

ಪೊನ್ನದ ಕಡಗವಿಟ್ಟು ತಿಮ್ಮಯತಾ । ಪೊಲ್ವನಾಮವ ನಿಟ್ಟು ।
ಅಂದುಕೆ ಘಲುಕೆನುತಾ
ಎನ್ನ ಮುಂದೆ ಬಂದು ನಿಂತಿಹನಲ್ಲೇ ।।

ಮಕರ ಕುಂಡಲವಿಟ್ಟು ತಿಮ್ಮಯ್ಯ ತಾ ಕಸ್ತೂರಿ
ತಿಲಕನಿಟ್ಟು । ಗೆಜ್ಜೆ ಘಲುಕೆನುತಾ ಸ್ವಾಮಿ
ತಾ ಬಂದು ನಿಂತಿಹನಲ್ಲೇ ।।

ಮುತ್ತಿನ ಪಲ್ಲಕ್ಕಿ ಯತಿಗಳು ಹೊತ್ತು ನಿಂತಿಹನಲ್ಲೇ
ಛತ್ರ ಚಾಮರದಿಂದಾ ರಂಗಯ್ಯನ ಉತ್ಸವ
ಮೂರುತಿಯ ।।

ತಾವರೆ ಕಮಲದಲ್ಲಿ ಕೃಷ್ಣಯ್ಯ ತಾ ಬಂದು ನಿಂತಿಹನಲ್ಲೆ
ವಾಯು ಬೊಮ್ಮದಿಗಳು ರಂಗಯ್ಯನ ಸೇವೆ
ಮಾಡುವರಲ್ಲೇ ।

ನವರತ್ನ ಕೆತ್ತಿಸಿದಾ ಸ್ವಾಮಿ ಎನ್ನ ಹೃದಯ ಮಂಟಪದಲ್ಲಿ
ಸರ್ವಾಭರಣದಿಂದ ಪುರಂದರ ವಿಠ್ಠಲನೆ ಕೂಡಿದನೆ ।।


ಇಂದು ನಿನ್ನ ಮೊರೆಯ ಹೊಕ್ಕೆನು

ಇಂದು ನಿನ್ನ ಮೊರೆಯ ಹೊಕ್ಕೆನು ವೆಂಕಟೇಶನೇ ।
ಎಂದಿಗಾದರೆನ್ನ ಕಾಯೋ ಶ್ರೀನಿವಾಸನೇ ।।

ಶೇಷಗಿರಿಯ ವಾಸ ಶ್ರೀಶ ದೋಷರಹಿತನೇ
ಏಸು ದಿನಕು ನಿನ್ನ ಪಾದ ದಾಸನು ನಾನೇ
ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೇ  ।।

ಕಮಲನಯನ ಕಾಮ ಜನಕ ಕರುಣವಾರಿದೇ
ರಮೆಯ ನಾಲ್ವ ಕಮಲನಾಭ ಹೇ ದಯಾನಿಧೇ
ಯಮನ ಪುರದಿ ಶಿಕ್ಷಿಸದಿರು ಪಾರ್ಥಸಾರಥೀ ।।

ಉರಗ ಶಯನ ಸುರರಿಗೊಡೆಯ ಸಿರಿಯ ರಮಣನೇ
ಶರಣ ಪಾಲ ಬಿರುದು ತೋರಿ ಪೊರೆವ ದೇವನೆ
ಕರುಣಿಸೆನಗೆ ಮುಕುತಿಯ ಪುರಂದರ ವಿಠ್ಠಲ ।।




ಪೂಜಿಪೆನೆ ನಿನ್ನಾ

ಪೂಜಿಪೆನೆ ನಿನ್ನಾ । ಪೂಜಿಪೆ ನಾ ನಿನ್ನ
ಜಾಜಿ ಪುಷ್ಪಗಳಿಂದ ಮೂರ್ಜಗನ್ಮಾತೆಯೇ
ಅಮರಾದಿ ಸುರರಿಂದ ಅಭಿವಂದಿತಳೆ ನಿನ್ನ
ಪಾದಾಂಬುಜವ ತೋರಿ ಪಾವನ ಮಾಡೆನ್ನ ।। ಪ ।।

ಅಂಬುಜಾಕ್ಷಿಯೆ ನಿನಗೆ ಚಿನ್ನದ ಕುಂಬದಿ
ಅಭಿಷೇಕ ಮಾಡುವೆನೆ । ಪೀತಾಂಬರವನುಟ್ಟು
ಸರ್ವಾಭರಣ ತೊಟ್ಟು ಅರಮನೆ ಮಂಟಪಕೆ
ಬಾರೆ ನಾರಾಯಣಿ ।। ಪೂಜಿಪೆನೆ ನಿನ್ನಾ ।।

ಅರಿಶಿಣ ಕುಂಕುಮ ಕರದಲ್ಲಿ ಹಿಡಕೊಂಡು
ಹರುಷದಿಂದೇರಿಸುವೆ ಬಿಡಿಮಲ್ಲಿಗೆಯ ತಂದು
ನಡೆಮುಡಿಗ್ಹಾಸುವೆ ಕಡಲಶಯನರಾಣಿ
ನಡೆದು ಬಾರಮ್ಮ ತಾಯೇ ।। ಪೂಜಿಪೆನೆ ನಿನ್ನಾ ।।

ಕಲ್ಹಾರದಿ ಪುಷ್ಪ ಮಲ್ಲಿಗೆ ಜಾಜಿಗೆ ಎಲ್ಲ ಸಮರ್ಪಿಸುವೆ
ಬಲ್ಲಿದ ಭಕ್ತರ ಬಿಷ್ಠೆಯ ಸಲ್ಲಿಸೆಂದು ಒಲ್ಲೆಂದು
ವೈಕುಂಠ ಕೊಲ್ಹಾಪುರಕ್ಕೆ ನಡೆ ।। ಪೂಜಿಪೆನೆ ನಿನ್ನಾ ।।

ಮಡದಿಯರೆಲ್ಲರು ಸಡಗರದಿಂದಲಿ
ಉಡಿಯತುಂಬುವರಮ್ಮಾ ಪಾಯಸ ಮೃಷ್ಟಾನ್ನ
ತೃಪ್ತಳಾಗಿ ಉಂಡು ಅಷ್ಟಐಶ್ವರ್ಯವ
ನೀಡೆ ಲಕ್ಷುಮಿ ದೇವಿಯೆ  ।। ಪೂಜಿಪೆನೆ ನಿನ್ನಾ ।।

ನಿತ್ಯ ತೃಪ್ತಳೆ ನಿನಗೆ ಮುತ್ತಿನಾರುತಿಯನ್ನು
ಅರ್ತಿಯಿಂದ ಬೆಳಗುವೆನೆ । ದಂಪತ್ತು ಸಂಪತ್ತು
ಹೆತ್ತ ಮಕ್ಕಳನಿತ್ತು ಆಪತ್ತು ಬಿಡಿಸಮ್ಮಾ
ಅನಂತ ಶಯನರಾಣಿ ।। ಪೂಜಿಪೆನೆ ನಿನ್ನಾ ।।


ಜೋ ಜೋ ಬಾಲ ಕೃಷ್ಣ

ಜೋ ಜೋ ಬಾಲ ಕೃಷ್ಣ ಜೋಗುಳ ಪಾಡುತ್ತ ತೂಗುವೆನಾ ।।

ನವರತ್ನ ಕೆತ್ತಿದ ತೊಟ್ಟಿಲ ತಂದು
ನಾಗ ಸಂಪಿಗೆ ಜಾಜಿ ಪೂಗಳ ಚೆಲ್ಲಿ ।
ನಾಲ್ಕು ವೇದಂಗಳ ಸರಪಣಿಯ ಕಟ್ಟಿ
ನಾಲ್ವರು ಸತಿಯರು ಸಮನಾಗಿ ಸೇರಿ ।।

ಯಶೋದೆ ನಂದನ ಜೋಜೋಜೋಜೋ
ಗೋಕುಲ ನಂದನ ಮುದ್ದು ಕೃಷ್ಣ ।
ನಂದನೆ ಜೋ ಕಂದನೆ ಜೋ
ಯಶೋದೆ ನಂದನ ಜೋಜೋಜೋಜೋ ।।

ಗೋವಿಂದ ಹರಿ ಗೋವಿಂದಾ

ಗೋವಿಂದ ಹರಿ ಗೋವಿಂದಾ ।
ಕೇಶವ ಕೃಷ್ಣ ಜನಾರ್ಧನ ।।

ಮತ್ಸ್ಯಾವತಾರದೊಳಾಡಿದನೆ । ಮಂದರಾಂಚಲ
ಬೆನ್ನೊಳಗಾ೦ದವನೆ  । ಅಚ್ಚ ಸೂಕರನಾಗಿ
ಬಾಳಿದನೆ । ಮದ ಹೆಜ್ಜೆ ಹಿರಣ್ಯಕನ ಸೀಳಿದನೆ ।। ಪ ।।

ಬಲಿಯೊಳು ದಾನವ ಬೇಡಿದನೆ । ಶಾಸ್ತ್ರ ಕುಲವ
ನಿರ್ಮೂಲನ ಮಾಡಿದನೆ । ಜಲನಿಧಿಗೆ ಬಿಲ್ಲ ಹೂಡಿದನೆ ।
ಕಾಮಗೊಲಿದು ಗೊಲ್ಲತಿ ಯೊಳಗಾಡಿದನೆ ।। ಪ ।।

ಸಾಧಿಸಿ ತ್ರಿಪುರವ ಗೆಲಿದವನೆ । ಬಲು ವಾದಿಸಿ
ಹಯವೇರಿ ಮೆರೆದವನೆ । ಭೇದದಿ ವಿಶ್ವವ ಗೆಲಿದವನೆ ।
ಬಡದಾದಿ ಕೇಶವ ನಾಮಗೊಲಿದವನೆ ।।

ಬಾರೇ ವೆಂಕಟರಮಣಿ

ಬಾರೇ  ವೆಂಕಟರಮಣಿ । ಶ್ರೀ ಶ್ರೀದೇವಿ ।। ಪ ।।
ಬಾರೇ ವೆಂಕಟರಮಣಿ ಪಾರಾಯಣ ಕೇಳೆ
ಚಾರುವದನೆ ಉಪಹಾರ ಕಾಲಕೆ ನಿತ್ಯ ।। ಪ ।।

ಏನು ಪುಣ್ಯವೆ ನಂದು ಪಾರಾಯಣಿ । ನೀನೆೇ ಕೇಳುತಬಂದು ।
ಹೀನ ಮಾನವನಿಗೆ ನೀನು ಬರುವಿಯಂದು ಜ್ಞಾನವಿಲ್ಲದೆ
ಉಚ್ಛಸ್ಥಾನದೊಳಗೆ ಕೂಡೆ ।। ಪ ।।

ಸ್ವಪ್ನದೊಳಗೆ ಬರುವಿ ಶ್ರೀ ಶ್ರೀದೇವಿ । ಕ್ಷಿಪ್ರತನದಿ ಪೋಗುವಿ ।
ಸರ್ಪಶಯನ ನಮ್ಮಪ್ಪ ಗೋಕುಲ ಬಾಲ । ನಪ್ಪಿ ಕೊಂಬುವ
ಸುಖ ಒಪ್ಪಿಸು ಬೇಗನೆ ।। ಪ ।।

ಮಂಗಳಾಂಗಿಯೆ ನಿನ್ನ ಕಾಣದೆ ಬಲು । ಭಂಗಪಡುವೆನಮ್ಮ ।
ಗಂಗ ಜನಕ ಸಿರಿ ರಂಗನಂಕದಿ ಕೂತು ।
ಬೃಂಗ ಕುಂತಳೆ ಹೃದಯಾಂಗದೊಳಗಾಡೆ ।। ಪ ।।

ಎಲ್ಲ ದೇವತಗಳನು ನೀ ತಡೆದಿಹ । ಪುಲ್ಲ ವಾರಿಜನಯನೆ ।
ಗೊಲ್ಲ ಬಾಲನ ಪದ ಪಲ್ಲವ ನೋಡದೆ ನಿಲ್ಲವಲ್ಲರು
ಮನ ಸೊಲ್ಲು ಲಾಲಿಸು ಬೇಗ ।। ಪ ।।

ಇಂದಿರೇಶನ ರಾಣಿ ಎನ್ನಯಮನ ಮಂದಿರದೊಳು ಬಾ ನೀ ।
ನಂದಗೋಕುಲ ಬಾಲ ಕಂದಾರನೆತ್ತಿಕರ ತಂದು ತೋರಿಸೆ
ಅರವಿಂದ ನಯನೆ ಲಕ್ಷ್ಮಿ ।।
  

ಬೃಂದಾವನದಿ ಕೊಳಲೂದಲಿಲ್ಲವೇ

ಬೃಂದಾವನದಿ ಕೊಳಲೂದಲಿಲ್ಲವೇ
ಅಂದು ಗೋಪಿಯರನ್ನು ಕರೆಯಲಿಲ್ಲವೇ ।
ಇಂದೇಕೆ ಮರೆತೆಯೋ ಮಾಧವ ರಾಧ ಮಾಧವ ವೇಣಿ ಮಾಧವ
ಬಂದು ನೀ ಎನ್ನ ಕಾಯೋ ಕೇಶವ ।। ಪ ।।

ನೀರೋಳು ನೀ ಆಟ ಆಡಲಿಲ್ಲವೇ (ನೀ)
ಭಾರವ ಬೆನ್ನೊಳು ಹೊರಲಿಲ್ಲವೇ ।
ಕೊರೆಯುತ ಮಸೆಯುತ ತಿರುಗಲಿಲ್ಲವೇ (ನೀ)
ಪೋರನ ಮಾತಿಗೆ ಪೊಗಲಿಲ್ಲವೇ ।। (ಕೃಷ್ಣ)

ಪೊಡವೀಯ ದಾನವ ಬೇಡಲಿಲ್ಲವೇ (ನೀ)
ಬಡವ ಬ್ರಾಹ್ಮಣನಾಗಿ ತಿರುಗಲಿಲ್ಲವೇ ।
ಮಡದೀಯ ಕಟ್ಟಿಕೊಂಡು ಹೋಗಲಿಲ್ಲವೇ (ನೀ)
ಕಡಗೋಲ ಕೈಯಲ್ಲಿ ಹಿಡಿಯಲಿಲ್ಲವೇ ।। (ಕೃಷ್ಣ)

ಬತ್ತಲೆ ಬೌದನಾಗಿ ತಿರುಗಲಿಲ್ಲವೇ (ನೀ)
ಉತ್ತಮ ತೇಜಿಯನೇರಲಿಲ್ಲವೆ ।
ಹತ್ತವತಾರವ ತೋರಲಿಲ್ಲವೇ (ನೀ)
ಮತ್ತೆ ಶ್ರೀ ಪುರಂದರ ವಿಠ್ಠಲನಲ್ಲವೆ ।। (ಕೃಷ್ಣ)

Monday, 28 October 2019

ನಿನ್ನ ನಾನೇನೆಂದೆನೋ ರಂಗಯ್ಯ ರಂಗ

ನಿನ್ನ ನಾನೇನೆಂದೆನೋ ರಂಗಯ್ಯ ರಂಗ
ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿ
ಪನ್ನಂಗ ಶಯನ ಪಾಲ್ಗಡಲೊಡೆಯನೆ ರಂಗ ।।

ಧೀರ ಸೋಮಕ ವೇದ ಚೋರ ಖಳನ ಸೀಳಿ ।
ವಾರಿಧಿಗಿಳಿದು ಪರ್ವತವಾನೆತ್ತಿ ।
ಧಾರುಣಿಯನು ಕದ್ದ ದನುಜದಲ್ಲಣ ನಾದ
ನಾರಸಿಂಹ ನಮೋ ನಮೋ ಎಂಬೆ ನಲ್ಲದೆ
ನೀರಪೊಕ್ಕವನೆಂದೆನೇ ಬೆನ್ನಿನಮೇಲೆ
ಭಾರ ಪೊಕ್ಕವನೆಂದೆನೇ ಮಣ್ಣನು ಬಗೆದು
ಏರವೆದ್ದವನೆಂದೆನೇ ರಕ್ಕಸನೊಳು
ಹೋರಿ ಹೊಯ್ದವನೆಂದು ಹೊಗಳೀದನಲ್ಲವೇ ।।

ಧರೆಯ ದಾನವ ಬೇಡಿ ಧರಣೀ ಈರಡಿಮಾಡಿ ।
ಪರಶು ಪಿಡಿದು ಕ್ಷತ್ರಿಯರಾಕಾಡಿ
ಚರಣದಿ ಪಾಶಾಣ ಪೆಣ್ಣು ಮಾಡಿದ ಪುಣ್ಯ
ಚರಿತಾಯದವಪತಿ ಶರಣೆಂದೆ ನಲ್ಲದೆ
ತಿರುಕಹಾರವನೆಂದೆನೇ ಹೆತ್ತ ತಾಯ
ಕರುಳ ಕೊಯ್ದವ ನೆಂದೆನೇ ವನವಾಸಾದಿ
ಉರುಕನೆರೆದವನೆಂದೆನೇ ಪೂತಣಿಯನು
ಸರಕುಮಾಡದೆ ಕೊಂದ ಹರಿ ಎಂದೇ ನಲ್ಲದೆ ।।

ಚಿತ್ತದಿ ಕೋಟಿ ಲಾವಣ್ಯ ತೇಜದಿ ಬಂದು
ಉತ್ತಮ ಸ್ತ್ರೀಯರ ವ್ರತವಳಿದು
ಮತ್ತೆ ಕಲ್ಕಿಯಾಗಿ ಮಧುಕರ ಮಡುಹಿದ
ಹತ್ತಾವತಾರದ ಹೆಡೆಯಂದೆ ನಲ್ಲವೇ
ಬತ್ತಲಿದ್ದವನೆಂದೆನೇ ತೇಜಿಯನೇರಿ
ಬತ್ತಿ ಆದವನೆಂದೆನೇ ಬಾರಿಬಾರಿಗೂ
ಮತ್ತೆ ಪುಟ್ಟಿದನೆಂದೆನೇ ಆದಿಕೇಶವ
ಭಕ್ತವತ್ಸಲನೆಂದು ಹೊಗಳೀದನಲ್ಲದೆ  ।।



ಅಡಿಗಳಿಗೊಂದಿಪೆ ಪುರಂದರ ಗುರುವೇ

ಅಡಿಗಳಿಗೊಂದಿಪೆ ಪುರಂದರ ಗುರುವೇ ।।
ಕಡು ಜ್ಞಾನ ಭಕ್ತಿ ವೈರಾಗ್ಯದ ನಿಧಿಯೆ ।।

ವರಮಧ್ವಮತ ಚಿರಾಂಬುದಿಗೆ ಚಂದ್ರಮನಾದೆ
ಗುರುವ್ಯಾಸರಾಯರಿಂದ ಉಪದೇಶಗೊಂಡೆ ।
ಎರಡೆರಡು ಲಕ್ಷದೆಪ್ಪತೈದು ಸಾವಿರ ।
ವರನಾಮವಳಿ ಮಾಡಿ ಹರಿಗೆ ಅರ್ಪಿಸಿದೆ ।।

ಗಂಗಾದಿ ಸಕಲ ತೀರ್ಥಂಗಳ ಚರಿಸೀ ತುರಂಗ
ವದನ ವೇದವ್ಯಾಸರ ।।
ಹಿಂಗಾದೆ ಮನದಲ್ಲಿ ನೆನೆದು ಸುಖಿಸುವ ।
ಮಂಗಳ ಮಹಿಮೆಯ ತುತಿಸಿ ತುತಿಸಿ ನಾ ।।

ನಿನಾತಿಶಯ ಗುಣ ವರ್ಣಿಸಲಳವಲ್ಲ ।
ನಿನ್ನ ಸೇವಕರ ಸೇವಕನೆಂದು ।
ಪನ್ನಂಗಶಯನ ಮುಕುಂದ ಕರುಣ।
ಪ್ರಸನ್ನ ವಿಜಯ ವಿಠ್ಠಲ ಸಂಪನ್ನ ।।

ಮೂರು ಜಗವ ಕುಣಿಸಿದಂತ

ಮೂರು ಜಗವ ಕುಣಿಸಿದಂತ ಗಾರುಡಿಗೈವ ಯಾರಕ್ಕ ।
ನಾರಾಯಣನಲ್ಲವೇನು ಅಣ್ಣ ಕೇಳೇ ತಮ್ಮ ।।

ಧರೆಯ ಸುರುಳಿ ಸುತ್ತಿದಂತ ಅರಸು ಇವ ಯಾರಕ್ಕ ।
ಮಧುರಾಪುರದಿ ಕದನವ ನಿಟ್ಟಿದಾ
ವರಹಾವತಾರ ಕೇಳ್ತಂಗಿ (ಇವ) ।।

ಕುದುರೆಯ ಮೇಲೆ ಎದುರಿಗೆ ಬರುವ
ಚೆಲುವಾ ಇವ ಯಾರಕ್ಕ । ಇವ ಯಾರಕ್ಕ ।।
ಅರಿಯದ ಭಕುತರ ಮೊರೆಯನ ಕೇಳ್ದ
ಕಲ್ಕ್ಯಾವತಾರ ಕೇಳ್ತಂಗಿ (ಇವ) ।।

ಇಂದು ವದನ ಸುಂದರ ಮೂರುತಿ
ಗೋವಿಂದ ಇವ ಕಾಣಕ್ಕ ।
ನಂದನ ಕಂದ ಹೆಳವನ ಕಟ್ಟೆಯ
ರಂಗ ಇವ ಕಾಣಕ್ಕ
ಹೆಳವನ ಕಟ್ಟೆಯ ರಂಗ ಕಾಣಕ್ಕ ।।


ಬಾರೋ ಬ್ರಹ್ಮಾದಿ ವಂದ್ಯ

ಬಾರೋ ಬ್ರಹ್ಮಾದಿ ವಂದ್ಯ ವಾಸುದೇವಸುತನೇ ।

ಗೊಲ್ಲರ ಮನೆಗೆ ಹೋಗಲಿ ಬೇಡಾ ಗೋವಿಂದಾ ಕೇಳೋ ।
(ನಿನಗೆ) ಹಾಲು ಮೊಸರು ಬೆಣ್ಣೆಯ ಕೊಡುವೆನು ಜಾಲ 
ಮಾಡದೆ ಬೇಗನೆ ಬಾರೋ ।।

ಧಿಗಿಧಿಗಿನೀ ಕುಣಿದಾಡುತ ಬಾರೋ ದೀನ ರಕ್ಷಕನೇ ।
(ಚಂದದಿ) ಜಗದೀಶ ನೀ ಕುಣಿದಾಡುತ ಬಾರೋ 
ಚೆನ್ನಕೇಶವನೇ ಬಾರೋ ।।

ದೊಡ್ಡ ದೊಡ್ಡ ಮುತ್ತಿನ ಹಾರ ಹಾಕಿನೋಡುವೆನೂ ।
(ನೀನು) ದೊಡ್ಡ ಪುರದ ದ್ವಾರಕಿ ವಾಸ ಪುರಂದರ ವಿಠ್ಠಲನೆ 
ಬೇಗನೆ ಬಾರೋ... ।।

ಕೃಷ್ಣ ಬಾರೋ ರಂಗ ಬಾರೋ

ಕೃಷ್ಣ ಬಾರೋ ರಂಗ ಬಾರೋ ।
ಕೃಷ್ಣಯ್ಯ ನೀ... ಬಾರಯ್ಯ ।।

ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆ ನಾದಗಳಿಂದ ।

ಮನ್ಮಥ ಜನಕನೇ ಬೇಗನೆ ಬಾರೋ ।
ಕಮಲಪತಿ ನೀ.. ಬಾರಯ್ಯ ।।
ಅಮಿತ ಪರಾಕ್ರಮ ಶಂಕರ ಬಾರೋ ।
ಕಮನೀಯ ಗಾತ್ರಾನೇ ಬಾರಯ್ಯ ದೊರೆಯೇ ।।

ಉರುಳು ಕೇಶಗಳ ಒಲಿವಾ ಅಂದ ।
ಬರದಿ ಕಸ್ತೂರಿ ತಿಲಕದ ಚಂದ ।।
ಶಿರದಿ ಗೋಪುವ ನವಿಲು ಕಣ್ಗಳಿಂದ ।
ತರತರ ದಾಭರಣ ಧರಿಸಿ ನೀ ಬಾ ।।

ಹಾಲು ಬೆಣ್ಣೆಗಳ ಕೈಯಲಿ ಕೊಡುವೆ ।
ಮೇಲಾದ ಭಕ್ಷಗಳ ಮುಚ್ಚಿಟ್ಟು ತರುವೆ ।।
ಜಾಲಮಾಡದೆ ನೀ ಬಾರಯ್ಯ ಮರಿಯೇ ।
ಬಾಲಯ್ಯನ ತಂದೆ ಪುರಂದರ ವಿಠ್ಠಲ ।।


test

ಸತತ ಪಾಲಿಸೊ ಎನ್ನ ಯತಿ ರಾಘವೇಂದ್ರ

ಸತತ ಪಾಲಿಸೊ ಎನ್ನ ಯತಿ ರಾಘವೇಂದ್ರ ।
ಪತಿತ ಪಾವನ ಪವನ ಸುತಮಾತಾಂಬುದಿ ಚಂದ್ರ ।।

ನಂಬಿದೆನೊ ನಿನ್ನ ಚರಣಾ೦ಬುಜವ ಮನ್ಮನದ ।
ಹಂಬಲ  ಪೂರೈಸೊ ಬೆಂಬಿಡದಲೇ । ಕುಂಭಿಣಿ
ಸುರರಿಪುರು೦ಬ ವಂದಿತ ಜಿತ । ಶಂಬರಾಂತಕ ಶಾಂತ 
ಕುಂಭ ಕಶ್ಯಪ ತನಯ ।।

ಕ್ಷೋಣಿಯೊಳು ನೀ ಕುಂಭ ಕೋಣಕ್ಷೇತ್ರದಿ ಜನಿಸಿ ।
ವೀಣಾ ವೆಂಕಟನಾಗಿ ಜ್ಞಾನದಿಂದ । ಸಾನುರಾಗದಿ
ದ್ವಿಜನ ಪ್ರಾಣ ಉಳುಹಿದ ಮಹಿಮೆ । ಏನೆಂದು
ಬಣ್ಣಿಸಲಿ ಜ್ಞಾನಿಗಳ ಕುಲತಿಲಕ ।।

ಮಂದಮತಿಗಳ ಸಂಗದಿಂದ ನಿಮ್ಮಯ ಚರಣ ।
ಇಂದಿನ ತನಕ ನಾ ಪೊಂದ ಲಿಲ್ಲಾ । ಕುಂದು
ಎಣಿಸದೆ ಕಾಯೋ ಕಂದರ್ಪ ಪಿತ । ಶ್ಯಾಮ
ಸುಂದರದಾಸ । ಶ್ಯಾಮ ಸುಂದರದಾಸ
ಕರ್ಮಂದಿಗಳ ಕುಲವರ್ಯ ।।



ಪಾಲಿಸೆ ಎನ್ನನು ಗೌರಿ

ಪಾಲಿಸೆ ಎನ್ನನು ಗೌರಿ ।।ಪ।।
ಪಾಲಿಸೆ ನಿನ್ನಯ ಪಾಲಿಗೆ ಬಂದೆನು ।
ಬೀಳುವೆ ಸರ್ವದ ಕಾಲಿಗೆ ಕರುಣದಿ ।।

ಶರಣೆಂದವರನು ಪೊರೆವಳುಎಂಬುವ ।
ಬಿರುದು ನಿನ್ನದು ಎಂದು ಅರಿತೆನು ಕರುಣದಿ ।।

ಸನ್ಮತ ಪುರುಷನ ಇನ್ನೆಲ್ಲಿ ಕಾಣೆನು ।
ಮನ್ಮಥ ನೆಂಬುವ ಬನ್ನ ಬಡಿಪ ಬಲು ।।

ಕಾಣೆನು ಶಾಂತಿಯ ಏನೆಂದು ಹೇಳಲಿ ।
ಪ್ರಾಣೇಶ ವಿಠ್ಠಲನು ತಾನೆ ಬಲ್ಲನು ತಾಯೇ ।।

ಸಿರಿರಮಣನ ಪ್ರಿಯೆ ಜಗನ್ಮಾತೆ

ಸಿರಿರಮಣನ ಪ್ರಿಯೆ ಜಗನ್ಮಾತೆ ।
ಅರವಿಂದಾಲಯ ತಾಯೆ ಶರಣು ಹೊಕ್ಕೆನು ಕಾಯೇ ।।

ಕಮಲಸುಗಂಧಿಯೆ ಕಮಲಾ ನೇತ್ರೆ ।
ಕಮಲಾ ವಿಮಲಾ ಶೋಭಿತೆ ।।
ಕಮನೀಯ ಹಸ್ತಪಾದ ಕಮಲ ವಿರಾಜಿತೆ ।
ಕಮಲೇ ಕಾಯೇ ಎನ್ನೆನು ।।

ನಿನ್ನ ಕರುಣಾ ಕಟಾಕ್ಷ ವೀಕ್ಷಣ ದಿಂದಲಿ
ತನುಮನಗಳನಿತ್ತೇ ।
ಧನ್ಯ ವಿರಾಜಿತೆ ಅಜಭವಾದಿಗಳು
ಪ್ರಸನ್ನೇ ಕಾಯೆ ಎನ್ನನು ।।

ಹರಿ ನಿನ್ನ ಉದರಲಿ ಜನಿಸಿದನೆಂಬಂತ
ಗರುವದಿ ಮೆರೆಯದಿರೆ ।
ನಿರುತ ನಿನ್ನಯ ಮುದ್ದು ಪುರಂದರವಿಠ್ಠಲನ
ಚರಣ ಕಮಲವ ತೋರಿಸೆ ।।


ಬಾರಯ್ಯ ಶ್ರೀನಿವಾಸ

ಬಾರಯ್ಯ ಶ್ರೀನಿವಾಸ ಭಕ್ತರ ಮನೆಗೆ|
ತೋರಯ್ಯ ನಿನ್ನ ಪಾದ ತೊಯ ಜಾಂಬಖನೇ ।।

ದುರುಳನ್ನ ತರಿದಂಥ ವರಚಕ್ರದಾರಿ । ಪರಮಾತ್ಮ
ಪರಬ್ರಹ್ಮ ಪರರಿಗುಪಕಾರಿ ।।

ವರಶೇಷಗಿರಿಯಲ್ಲಿ ನಿರುತ ನಿಂತಿರುವೀ ।
ಹರಿದಾಸರು ಕರೆದರೇ ಎಲ್ಲಿದ್ದರೂ ಬರುವೀ ।।

ಅನಂತನಾಭನು ನೀನೆ ಅನಂತ ಸದ್ಗುಣನೇ ।
ನೆನೆವರಿಗೊಲಿದಂತ ಪವಮಾನ ಈಶ ।।

ಅರಣ್ಯದ ಒಳಗಿದ್ದ ಕರಿರಾಜಗೊಲಿದೆ ।
ದುರುಳ ಹಿರಣ್ಯಾಕ್ಷನ ಶಿರವನ್ನೇ ತರಿದೆ ।।

ಅಜಭ ವಾಧಿಪ ನೀನು ವಿಜಯ ಸಾರಥಿಯೇ ।
ತ್ರಿಜಗ ವಂದಿತ ಈಶ ವಿಜಯ ವಿಠ್ಠಲನೆ ।।

ಗಜವದನ ಬೇಡುವೆ

 ಗಜವದನ ಬೇಡುವೆ । ಗೌರೀ ತನಯ ।।
ತ್ರಿಜಗ  ವಂದಿತನೇ । ಸುಜನರ ಪೊರೆವನೇ ।।

ಪಾಶಾಂಕುಶಧರ ಪರಮ ಪವಿತ್ರ ।
ಮೂಷಿಕ ವಾಹನ । ಮುನಿಜನ ಪ್ರೇಮಾ||

ಮೋದದಿ ನಿನ್ನಯ ಪಾದವ ತೋರೋ ।
ಸಾಧು ವಂದಿತನೇ । ಆದರದಿಂದದಿ ।।

ಸರಸಿಜನಾಭ ಶ್ರೀ । ಪುರಂದರ ವಿಠ್ಠಲ|
ನಿರುತ ನೆನೆಯುವಂತೆ । ದಯಮಾಡೋ  ।।