ಆರುತಿ ಬೆಳಗೋಣ ಬಾರೇ ಶ್ರೀಹರಿಗೆ ॥
ಆರುತಿ ಬೆಳಗೋಣ ವಾರಿಜ ನಾಭಗೇ
ನಾರಿಯರೆಲ್ಲರೂ ತೀವ್ರದಿ೦ದಲಿ । ಮುತ್ತಿನಾರುತಿ
ಬೆಳಗೋಣ ಬಾರೇ ॥
ಮತ್ಸ್ಯ ಕೂರ್ಮನಿಗೆ ಸ್ವಚ್ಛವರಹನಿಗೆ ॥
ವತ್ಸ ಪ್ರಹ್ಲಾದನ ಸಲಹಿದ ನರಹರಿಗೆ ॥
ಪುಟ್ಟವಾಮನನಿಗೆ ದಿಟ್ಟ ಭಾರ್ಗವನಿಗೆ
ಶಿಲೆಯನುದ್ಧರಿಸಿದ ಶ್ರೀ ರಾಮಚ೦ದ್ರಗೇ ॥
ಉಧ್ಭವ ಸಖನಿಗೆ ಮುದ್ದು ಕೃಷ್ಣನಿಗೆ ॥
ಬೌದ್ಧಾವತಾರ ತಾಳ್ದ ಮುದ್ದು ಹಯವದನಗೆ ॥
No comments:
Post a Comment